ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಮತೆಯ ಕಟ್ಟು

  ಸಮತೆಯ ಕಟ್ಟು   ಹರಿದ ಅಂಗಿಗೆ ಕೊಳೆತ ಚಡ್ಡಿಗೆ ತೆರಿಗೆ ಕಟ್ಟುವ ಸಮಯ ಬಂದಿದೆ ನಿಮ್ಮ ದೇವರ ಜಗುಲಿ ಮೇಲಿನ ಕಟ್ಟಿಗೆ ಭಯವೂ ಕಾಡುತಿದೆ   ಹರಿದ ಗೋಣಿಚೀಲ ಮಸ್ತಕದ ದಾಸ್ತಾನಾಗುವ ಸಮಯ ಬಂದಿದೆ ಮಸ್ತಕ ಪುಸ್ತಕದಿಂದ ದೂರವಾದ ಕೈಗಳು ನಿಮ್ಮ ಜಗುಲಿ ಮೇಲಿನ ಕಟ್ಟಿಗೆ ಸವಾಲೊಡ್ಡಿವೆ ಸಮಯ ಸರಿದು ಹೋಗುವ ಮುನ್ನ ತೆರಿಗೆ ಕಟ್ಟಿ   ಕುರ್ಚಿಯ ಕಾಲುಗಳು ಅಲುಗಾಡುವ ಸಮಯ ಬಂದಿದೆ ಕಾಲುಗಳೆ ಇಲ್ಲದ ಕಾಲುಗಳು ನಿಮ್ಮ ಕನಸುಗಳನು ಕದಡಬಹುದು ಹೊತ್ತು ಸತ್ತು ಹೋಗುವ ಮುನ್ನ ತೆರಿಗೆ ಕಟ್ಟಿ   ನಿಮ್ಮ ಕಟ್ಟಳೆಗಳನ್ನು ಮೀರುವ ಸಮಾನತೆಯ ಕಟ್ಟು ಬಂದಿದೆ ನಿಮ್ಮ ಬೂದಿ ಹಾರಿ ಹೋಗುವ ಮುನ್ನ ತೆರಿಗೆ ಕಟ್ಟಿ                                                                                                       ...