ಎರಡೆ ನಿಮಿಷದ ಮೌನಾಚರಣೆ

ಗೆಳೆಯ ರಟ್ಟೀಹಳ್ಳಿ ರಾಘವಾಂಕುರ ಅವರ 'ಎರಡೆ ನಿಮಿಷದ ಮೌನಾಚರಣೆ' ಎನ್ನುವ ಶಿರ್ಷಿಕೆಯ ಗಜಲ್‍ನ್ನು ಸಾಹಿತ್ಯಾಸಕ್ತರು ಓದಿ ಪ್ರತಿಕ್ರಿಯಿಸಲಿ ಎನ್ನುವ ಕಾರಣಕ್ಕಾಗಿ 'ಮುಕ್ತಕಂಠ' ಬ್ಲಾಗ್‍ನಲ್ಲಿ ಪ್ರಕಟಿಸಿದ್ದೇನೆ. ಸದಾ ಸಾಹಿತ್ಯ ವಿಚಾರ ಸೇರಿದಂತೆ ನಿತ್ಯದ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳುವ ನಾವಿಬ್ಬರೂ ಅನಿಕೇತನ ವಿದ್ಯಾರ್ಥಿ ನಿಲಯದ ರೂಮ್ ನಂ.07ರ ನಿವಾಸಿಗಳು. ಈಗಾಗಲೆ ಒಂದು ಕಾದಂಬರಿ ಮತ್ತು ಕಿರುಗವಿತೆಗಳ ಸಂಕಲನವನ್ನು ಪ್ರಕಟಿಸಿರುವ ಇವರು ಯುವ ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೃಜನಶೀಲ ಕೆಲಸಕ್ಕಾಗಿ ಪುರಾಸ್ಕಾರಗಳನ್ನೂ ಪಡೆದಿದ್ದಾರೆ. ಸದ್ಯ ದ್ರಾವಿಡ ಸಂಸ್ಕøತಿ ಅಧ್ಯಯನ ವಿಭಾಗದಲ್ಲಿ ಗಜಲ್ ಸಾಹಿತ್ಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಎರಡೆ ನಿಮಿಷದ ಮೌನಾಚರಣೆ ನನ್ನ ಮುಂಬರುವ ಸಾವಿಗೆ ನಾನಿದ್ದಾಗಲೇ ಮಾಡಿಬಿಡಿ ಎರಡೆ ನಿಮಿಷದ ಮೌನಾಚರಣೆ ಕಟು ಮಾತುಗಳಿಗಿಂತ ಮೌನವೆ ಬಲು ಹಿತವೆನಿಸುವ ಎರಡೆ ನಿಮಿಷದ ಮೌನಾಚರಣೆ ಕಲಿಸಬೇಕಿಲ್ಲ ಯಾರಿಗೂ ಗಾಂಭೀರ್ಯದ ನಟನೆ ಸಾವೆಂಬುದು ಕರುಣೆ ಬಿತ್ತುವ ಕೂರಿಗೆ ಒಳಗಿನ ಹುನ್ನಾರಕ್ಕಿಂತ ಗಂಟುಮೋರೆಯ ಮುನಿಸೆ ಲೇಸೆನಿಸುವ ಎರಡೆ ನಿಮಿಷದ ಮೌನಾಚರಣೆ ಆಕಳಿಕೆ, ಕೆಮ್ಮು, ಸೀನುಗಳೆಲ್ಲ ಭಂಗ ತರಬಹುದು ನಿಮ್ಮ ಶ್ರದ್ಧೆಗೆ ಮುಖವಾಡ ಕಳಚುವ...