ಪೋಸ್ಟ್‌ಗಳು

ನವೆಂಬರ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೂ ಬಾಡಿತು

ಇಮೇಜ್
ಹಸಿರು ಮರದ ಟೊಂಗೆಯ ಹೂ ಅರಳಿತು ನಿನ್ನೆ, ನಿನ್ನೆ ಮುಂಜಾವ ಮಂಜಿನಲಿ ಮೊಗ್ಗಾಗಿ ನಕ್ಕ ಹೂ ಅರಳಿತು ಹಕ್ಕಿ ತುದಿಗೆಲ್ಲ ಎಲೆಯಲಿ ಕುಳಿತು ಮಧುವ ಹೀರಿತ್ತು ದಿನ ಮುಗಿದು ರಾತ್ರಿ ಸರಿದು ಬೆಳಕು ಹರಿದಾಗ ಸುಕ್ಕಾಗಿ ಮುರುಟಿತ್ತು ಹಗಲ ಬೆಳಕಲಿ ಕಂಗೊಳಿಸಿ ಕತ್ತಲ ನೀರವತೆಯಲಿ ಮುದುಡಿತ್ತು ಮೊಗ್ಗಾಗಿ ಕಣ್ಣು ಕುಕ್ಕಿತ್ತು ಅರಳಿ ರಮಿಸಿತ್ತು ದಿನ ಒಂದು ಕಳೆದಿತ್ತು ಹಸಿರ ಪೊರೆಯಲಿ ಹುದುಗಿತ್ತು ಕಳಚಿ ಹೊರಬಿತ್ತು ಸೊಗಸಾಗಿತ್ತು, ಮರುದಿನ ಕೆಳಗಿತ್ತು ಕಟ್ಟುವ ಕೈ ಸೋಕಿತು ದೇವರ ಶಿರವೇರಿತು ದೀಪದ ಬೆಳಕು ಮಿನುಗಿತ್ತು ಹಲವು ಕಣ್ಣುಗಳ ತನ್ನೆಡೆಗೆ ಸೆಳೆದಿತ್ತು ಹೊತ್ತು ಮುಳುಗುವುದರೊಳಗೆ ಹಳೇ ಗೆಳೆಯರ ಸೇರಿತ್ತು ಇಬ್ಬನಿ ಸುರಿವಾಗ ಬಣ್ಣವಿತ್ತು, ಅಂದವಿತ್ತು, ನವಿರಾಗಿತ್ತು ಬೆಳಕು ಕಳೆಗುಂದಿತು ತಮ ಆವರಿಸಿತು ಹೂ ಬಾಡಿತು. ದುಂಬಿಗಳ ಝೇಂಕಾರ ರವದಲಿ ಹಾರಾಟ ಮೇಲಾಟದಲಿ ಗರ್ಭನಿಂತಿತು ಅದೇ ನಗುವಿನ ಸಲ್ಲಾಪದಲಿ ದಿನ ಕಳೆಯಿತು ತೊಟ್ಟು ಕಳಚಿತು ಭಕ್ತಿಗೆ, ಅಂದಕೆ, ಸುಖಕೆ ಕೊನೆಗೆ ಆಘ್ರಾಣಿಸಿ ಅನುಭವಿಸಲು ಮೊಗ್ಗಾಗಿ ಹೂವಾಗಿ ಕಾಯಾಗಿ ದಿನವೊಂದು ಕಳೆಯಿತು ಆಕಾಶಕ್ಕೇರಿದ ಮುಖ ಭೂಮಿಗೆ ಇಳಿದಿತ್ತು ಬೀಜ ಮಣ್ಣು ಸೇರಿತು ಮತ್ತೆ, ಅದೇ ಸತ್ವ ಅದೇ ಕಸುವು ಗಾರು ನೆಲವ ಸೀಳಿ ಹೊರಬಿತ್ತು ದಿನದ ಹಂಗು ಕಳಚಿತು ಆಯುಷ್ಯ ಮರಳಿತು  :-ಪ್ರಶಾಂತ್ ದಿಡುಪೆ :-ರೇಖಾ ಚಿತ್ರ: ವಿಜಯ...

ಈ ಸಮಯ

ಇಮೇಜ್
ಕಟ್ಟಿದ ಸರವೊಂದಕ್ಕೇನು ಬಲ ಅನುಸರಿಸುವರೆಂಬ ಹುಂಬಿನಲಿ ಸುರಿಯಿತಕ್ಷತೆಯ ಮಳೆ ದಕ್ಕಿತು ಒಪ್ಪಿಗೆಯ ಚಾವಿ ಮುಚ್ಚಿತಲ್ಲಿಗೆ ಸ್ವಾತಂತ್ರ್ಯ ದಾರಿ ಜಲಬತ್ತಿದ ಬರಡು ರೇಖೆಗಳು ಮೂಡಿತ್ತು ವದನದಲಿ ಸಂಬ್ರಮದ ಸುಳಿಯಲ್ಲಿ ಸತ್ತಿತ್ತು ದನಿಯೊಂದು ಕಟ್ಟಳೆ ಕೆಡವಲಾಗದ ವೇದನೆಯಲಿ ನಿರೀಕ್ಷೆ ಮುಟ್ಟಲಾಗದ ಬೇನೆಯಲಿ ಸಹಿಸಿ, ಸಲಹಿದ ಓ ತಾಯೇ ನಿನಗೂ ಬೇಕಾಯ್ತೆ ಈ ಪರಂಪರೆ...? ನೆನಪು ಕಷ್ಟಗಳಿಗೂ ಮರೆವೆ..! ಒಮ್ಮೆ ಬೆಂದರೂ ಮತ್ತೇಕೆ ದೂಡುವೆ ಬೆಂಕಿಗೆ...? ಬೇಡ, ಬೇಡ ನಾನೆ ಕೊಳ್ಳಿಯಿಕ್ಕುವೆ ಕಟ್ಟಳೆಯ ಕಟ್ಟಿಗೆ                                          :-ಪ್ರಶಾಂತ್ ದಿಡುಪೆ :-ರೇಖಾಚಿತ್ರ ಬರೆದವರು: ವಿಜಯ್ ರಮೇಶ್ ಬೊಳಶೆಟ್ಟಿ, ಹಂಪಿ

ಪರಮೇಶಿಯ ಪಾದಯಾತ್ರೆ

ಇಮೇಜ್
ಪರಮೇಶಿಯ ಪಾದಯಾತ್ರೆ     ಪರಮೇಶಿ ಅದಾವ ಕ್ಷಣದಲ್ಲಿ ಚಾಪೆಯಿಂದ ದಡಕ್ಕನೆ ಎದ್ದಿದ್ದನೊ ತನ್ನ ಮುರುಕಲು ಪಂಚೆಯನ್ನೆತ್ತಿಕೊಂಡ. ಅದನ್ನ ಪಂಚೆಯೆಂದು ಆತ ಉಟ್ಟುಕೊಂಡಿರುವುದರಿಂದ ಹೇಳಬಹುದಷ್ಟೇ, ಅದರಲ್ಲಿ ಸಾವಿರ ತೂತು ಬಿದ್ದು ಅಕ್ಷರಶಃ ಮೀನಿನ ಬಲೆಯಂತಾಗಿತ್ತು. ಆಗತಾನೆ ಸ್ಕೂಲಿನಲ್ಲಿ ಪ್ರಪಂಚದ ಭೂಪಟವನ್ನು ಅವಸರದಲ್ಲಿ ನೊಡಿ ಬಂದ ಹೈಕಳಾಗಿದ್ದರೆ ಅರೇ ಇದೇನು ಪರಮೇಶಿ ಪ್ರಪಂಚವನ್ನೇ ಸುತ್ತಿಕೊಂಡಿದ್ದಾನಲ್ಲ ಎಂದು ಬಾಯಿ ಬಿಡುತ್ತಿದ್ದರು. ಎದ್ದವನೇ ಸೀದಾ ಮಾವಿನ ಮರದ ಬಳಿ ಓಡಿದ. ಆತ ಬೆಳಗ್ಗಿನ ಜಾವ ಮೊದಲು ಭೇಟಿ ನೀಡುವ ಸ್ಥಳವದು. ಪ್ರಪಂಚ ಫಾರ್‍ವರ್ಡ್ ಆಗಿದ್ದರೂ ಪರಮೇಶಿ ಇನ್ನೂ ಬ್ಯಾಕಲ್ಲೇ ಇದ್ದ. ಹೆಂಡತಿ ಪೂರ್ವಿ ಸಾವಿರ ಸಾರಿ ಪೇಸ್ಟ್ ತನ್ನಿ ಎಂದರೂ ಅದರಲ್ಲಿ ಮೂಳೆ ಪುಡಿ ಇದೆ ಅದರಲ್ಲಿ ಬೆಳಗಾಗಿ ಎದ್ದು ಹಲ್ಲುಜ್ಜೊದ ಎಂದು ಹೆಂಡತಿಯ ಬಾಯಿಗೆ ಬೀಗ ಹಾಕಿದ್ದ. ಆತನೂ ಜಿಪುಣಾಗ್ರೇಸರ, ಎಲ್ಲರೂ ವಸ್ತುವಿನ ಒಳ್ಳೆಯ ಗುಣವನ್ನು ಕೇಳುವುದರಲ್ಲಿ ಇಂಟರೆಸ್ಟ್ ತೊರಿಸಿದ್ರೆ ಈತ ಅದರಿಂದಾಗುವ ಅಡ್ಡಪರಿಣಾಮಗಳನ್ನು ರಿಸರ್ಚ್ ಮಾಡಿ ತಿಳಿದವನಂತೆ ತನ್ನದೆ ಕಟ್ಟುಕತೆಗಳನ್ನು ಕಟ್ಟಿ ಬೊಗಳೆ ಬಿಡುತ್ತಿದ್ದ. ಬೇಗ ಬೇಗ ಗೆಲ್ಲೊಂದರಿಂದ ಎಲೆಯೊಂದನ್ನು ಕಿತ್ತು, ಬಾಯಿಯಿಂದ ಗಾಳಿ ಬೆಳಕನ್ನು ಸವಿಯಲು ಹೊರಗೆ ಬಂದಂತಿದ್ದ ಹಲ್ಲನ್ನು ತಿಕ್ಕತೊಡಗಿದ. ಆತನ ಮುಖವನ್ನು ಮೊದಲ ಬಾರಿ ನೋಡಿದವರು ಮುಂದೆ ಅಪರೂಪಕ್ಕೆ ಸಿಕ್ಕಿದರೆ ಅನಾಯಾಸವಾ...

ಹಂಪಿ ಉತ್ಸವದ ಕವಿಗೋಷ್ಠಿಯ ಪತ್ರಿಕಾ ವರದಿಗಳು.

ಇಮೇಜ್
ಈ ಬಾರಿಯ ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸಿದ್ದು ನಮ್ಮ ಪ್ರತಿಭೆಗೊಂದು ವೇದಿಕೆ ದೊರೆಯಿತು.  

ಮುಖವಾಡ ಕಳಚಿದವರು

ಹಕ್ಕಿ ಹಾರುತ್ತಿದೆ ನೋಡಿದಿರಾ? ನಾನೇ, ನನ್ನ ಕುಂಚದಲ್ಲಿ ಬಿಡಿಸಿದ ಹಕ್ಕಿ ಗಿಡುಗನಾಗಿ ನನ್ನೆದೆಗೆ ಕುಕ್ಕುವ ಭರದಿ ಕೆಂಪುಹಾಸಿನ ಬಾನಿನಲಿ ಕೋಟಿ ಕಣ್ಣಿನ ಪದರು ಪದರಿನಲಿ ಬಿಂಬವಾಗಿ ಹಾರುತ್ತಿದೆ ಕುಂಚವೇ ಅಲುಗುತ್ತಿದೆ ಯಾವ ರೇಖೆಯೂ ಮೂಡುತ್ತಿಲ್ಲ ಅದೇ ಹಕ್ಕಿಯ ಬಿಂಬ ನೆನಪನ್ನು ಕದಡುತ್ತಿದೆ ರೇಖೆಗಳು ಯಾವರೂಪವನ್ನು ಪಡೆಯುತ್ತದೋ? ಪದವೆಲ್ಲಿ ಅದರ ಕಣ್ಣು ಕುಕ್ಕುತ್ತದೊ? ಎನ್ನುವ ಅಸಹನೀಯ ಕಿರುಕುಳ ಬೆಳಕಿಗೆ ಬೇಡಿತೊಡಿಸಿ ಕತ್ತಲ ಸಾಮ್ರಾಜ್ಯದಲ್ಲಿ ಕೊಲ್ಲುವ ತರಾತುರಿ ಎಲ್ಲವೂ ಅಸಂಗತ... ಪೆನ್ನಿನ ಕರಿ ನಳಿಗೆಯಲ್ಲಿ ಶಾಯಿಯ ಪಸೆ ಆರುತ್ತಿದೆ ಹಕ್ಕಿ ಕಾಡುವ ಮುನ್ನ... ಚಿರಂಜೀವಿ ಪಾತ್ರಗಳನ್ನು ಸೃಷ್ಟಿಸಬೇಕು ಮಂದಸ್ಮಿತ ಕರಾಳ ಮುಖಗಳನು ಕಳಚಲು ನಿರ್ಭಿತ ಮನಸಿನಲಿ ಅಳಿದರೇನಂತೆ ಕಾಯ ಉಳಿವುದು ಪೋಣಿಸಿದ ಬೀಜಾಕ್ಷರಗಳು ಮನದಲ್ಲಿ, ಸ್ಮøತಿಯಲ್ಲಿ ನಿರ್ಭಿತ ಕಂಠಗಳ ದನಿಯಾಗಿ ಮತ್ತೆ ಕಾಡುವುದು ಆ ಹಕ್ಕಿ ರತಕ್ತದೋಕುಳಿಯಾಡಲು ಸ್ಮಶಾನ ಮಾರಿಯಂತೆ ಮುಪ್ಪಡರಿ ಹಾರಾಟ ನಿಂತಾಗ ಕಾಲ, ಪಾಠ ಮಾಡುತ್ತಾನೆ ನನ್ನ ಪಾತ್ರಗಳೂ ಅಧ್ಯಾಯದಲ್ಲಿ ಇರಬಹುದು ಯಾಕೆಂದರೆ... ಮಸಿಯಲ್ಲಿ ಮೂಡಿದರೂ ಚಿರಂಜೀವಿಗಳವರು ನಿಮ್ಮ ಮುಖವಾಡ ಕಳಚಿದವರು - ಪ್ರಶಾಂತ್ ದಿಡುಪೆ