ಮುಖವಾಡ ಕಳಚಿದವರು
ಹಕ್ಕಿ ಹಾರುತ್ತಿದೆ ನೋಡಿದಿರಾ?
ನಾನೇ, ನನ್ನ ಕುಂಚದಲ್ಲಿ ಬಿಡಿಸಿದ ಹಕ್ಕಿ
ಗಿಡುಗನಾಗಿ
ನನ್ನೆದೆಗೆ ಕುಕ್ಕುವ ಭರದಿ
ಕೆಂಪುಹಾಸಿನ ಬಾನಿನಲಿ
ಕೋಟಿ ಕಣ್ಣಿನ ಪದರು ಪದರಿನಲಿ
ಬಿಂಬವಾಗಿ ಹಾರುತ್ತಿದೆ
ಕುಂಚವೇ ಅಲುಗುತ್ತಿದೆ
ಯಾವ ರೇಖೆಯೂ ಮೂಡುತ್ತಿಲ್ಲ
ಅದೇ ಹಕ್ಕಿಯ ಬಿಂಬ
ನೆನಪನ್ನು ಕದಡುತ್ತಿದೆ
ರೇಖೆಗಳು ಯಾವರೂಪವನ್ನು ಪಡೆಯುತ್ತದೋ?
ಪದವೆಲ್ಲಿ ಅದರ ಕಣ್ಣು ಕುಕ್ಕುತ್ತದೊ? ಎನ್ನುವ
ಅಸಹನೀಯ ಕಿರುಕುಳ
ಬೆಳಕಿಗೆ ಬೇಡಿತೊಡಿಸಿ
ಕತ್ತಲ ಸಾಮ್ರಾಜ್ಯದಲ್ಲಿ ಕೊಲ್ಲುವ ತರಾತುರಿ
ಎಲ್ಲವೂ ಅಸಂಗತ...
ಪೆನ್ನಿನ ಕರಿ ನಳಿಗೆಯಲ್ಲಿ
ಶಾಯಿಯ ಪಸೆ ಆರುತ್ತಿದೆ
ಹಕ್ಕಿ ಕಾಡುವ ಮುನ್ನ...
ಚಿರಂಜೀವಿ ಪಾತ್ರಗಳನ್ನು ಸೃಷ್ಟಿಸಬೇಕು
ಮಂದಸ್ಮಿತ ಕರಾಳ ಮುಖಗಳನು
ಕಳಚಲು
ನಿರ್ಭಿತ ಮನಸಿನಲಿ
ಅಳಿದರೇನಂತೆ ಕಾಯ
ಉಳಿವುದು ಪೋಣಿಸಿದ ಬೀಜಾಕ್ಷರಗಳು
ಮನದಲ್ಲಿ, ಸ್ಮøತಿಯಲ್ಲಿ
ನಿರ್ಭಿತ ಕಂಠಗಳ ದನಿಯಾಗಿ
ಮತ್ತೆ ಕಾಡುವುದು ಆ ಹಕ್ಕಿ
ರತಕ್ತದೋಕುಳಿಯಾಡಲು
ಸ್ಮಶಾನ ಮಾರಿಯಂತೆ
ಮುಪ್ಪಡರಿ ಹಾರಾಟ ನಿಂತಾಗ
ಕಾಲ, ಪಾಠ ಮಾಡುತ್ತಾನೆ
ನನ್ನ ಪಾತ್ರಗಳೂ ಅಧ್ಯಾಯದಲ್ಲಿ ಇರಬಹುದು
ಯಾಕೆಂದರೆ...
ಮಸಿಯಲ್ಲಿ ಮೂಡಿದರೂ
ಚಿರಂಜೀವಿಗಳವರು
ನಿಮ್ಮ ಮುಖವಾಡ ಕಳಚಿದವರು
- ಪ್ರಶಾಂತ್ ದಿಡುಪೆ
ನಾನೇ, ನನ್ನ ಕುಂಚದಲ್ಲಿ ಬಿಡಿಸಿದ ಹಕ್ಕಿ
ಗಿಡುಗನಾಗಿ
ನನ್ನೆದೆಗೆ ಕುಕ್ಕುವ ಭರದಿ
ಕೆಂಪುಹಾಸಿನ ಬಾನಿನಲಿ
ಕೋಟಿ ಕಣ್ಣಿನ ಪದರು ಪದರಿನಲಿ
ಬಿಂಬವಾಗಿ ಹಾರುತ್ತಿದೆ
ಕುಂಚವೇ ಅಲುಗುತ್ತಿದೆ
ಯಾವ ರೇಖೆಯೂ ಮೂಡುತ್ತಿಲ್ಲ
ಅದೇ ಹಕ್ಕಿಯ ಬಿಂಬ
ನೆನಪನ್ನು ಕದಡುತ್ತಿದೆ
ರೇಖೆಗಳು ಯಾವರೂಪವನ್ನು ಪಡೆಯುತ್ತದೋ?
ಪದವೆಲ್ಲಿ ಅದರ ಕಣ್ಣು ಕುಕ್ಕುತ್ತದೊ? ಎನ್ನುವ
ಅಸಹನೀಯ ಕಿರುಕುಳ
ಬೆಳಕಿಗೆ ಬೇಡಿತೊಡಿಸಿ
ಕತ್ತಲ ಸಾಮ್ರಾಜ್ಯದಲ್ಲಿ ಕೊಲ್ಲುವ ತರಾತುರಿ
ಎಲ್ಲವೂ ಅಸಂಗತ...
ಪೆನ್ನಿನ ಕರಿ ನಳಿಗೆಯಲ್ಲಿ
ಶಾಯಿಯ ಪಸೆ ಆರುತ್ತಿದೆ
ಹಕ್ಕಿ ಕಾಡುವ ಮುನ್ನ...
ಚಿರಂಜೀವಿ ಪಾತ್ರಗಳನ್ನು ಸೃಷ್ಟಿಸಬೇಕು
ಮಂದಸ್ಮಿತ ಕರಾಳ ಮುಖಗಳನು
ಕಳಚಲು
ನಿರ್ಭಿತ ಮನಸಿನಲಿ
ಅಳಿದರೇನಂತೆ ಕಾಯ
ಉಳಿವುದು ಪೋಣಿಸಿದ ಬೀಜಾಕ್ಷರಗಳು
ಮನದಲ್ಲಿ, ಸ್ಮøತಿಯಲ್ಲಿ
ನಿರ್ಭಿತ ಕಂಠಗಳ ದನಿಯಾಗಿ
ಮತ್ತೆ ಕಾಡುವುದು ಆ ಹಕ್ಕಿ
ರತಕ್ತದೋಕುಳಿಯಾಡಲು
ಸ್ಮಶಾನ ಮಾರಿಯಂತೆ
ಮುಪ್ಪಡರಿ ಹಾರಾಟ ನಿಂತಾಗ
ಕಾಲ, ಪಾಠ ಮಾಡುತ್ತಾನೆ
ನನ್ನ ಪಾತ್ರಗಳೂ ಅಧ್ಯಾಯದಲ್ಲಿ ಇರಬಹುದು
ಯಾಕೆಂದರೆ...
ಮಸಿಯಲ್ಲಿ ಮೂಡಿದರೂ
ಚಿರಂಜೀವಿಗಳವರು
ನಿಮ್ಮ ಮುಖವಾಡ ಕಳಚಿದವರು
- ಪ್ರಶಾಂತ್ ದಿಡುಪೆ
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಿಮ್ಮ ಮುಕ್ತಕಂಠದಲ್ಲಿ ಇನ್ನಷ್ಟು ಈ ರೀತಿಯ ಉತ್ತಮ ಬರಹಗಳು ಮೂಡಿ ಬರಲಿ..
ಪ್ರತ್ಯುತ್ತರಅಳಿಸಿ