ಪೋಸ್ಟ್‌ಗಳು

ತುಂಡುಭೂಮಿ

ಇಮೇಜ್
ತುಕ್ರನಿಗೆ ಎರಡು ದಿನದಿಂದ ಪುರುಸೊತ್ತಿಲ್ಲ. ಎಲೆಯಡಿಕೆ ಹಾಕಲೂ ಬಿಡುವಿಲ್ಲದಷ್ಟು ಕೆಲಸ. ಕೊರಗಪ್ಪ ಶೆಣೈರ ಮಕ್ಕಳ ಜಗಳವೀಗ ಆಸ್ತಿ ಪಾಲಾಗುವಲ್ಲಿಗೆ ಬಂದು ಮುಟ್ಟಿತ್ತು. ತುಕ್ರನಿಗೆ ಈ ಪಾಲಿನ ದೆಸೆಯಿಂದ  ಇಡೀ ಗುಡ್ಡೆ ಬೈಲೆಲ್ಲ ಅಲೆದಾಡಿ, ಸರ್ವೆಯ ಸರಪಳಿಯೆಳೆದು ಸಾಕು ಸಾಕಾಗಿತ್ತು ಆದರೂ ಆತನಿಗೆ ಖುಷಿಯೊ ಖುಷಿ. ಈ ನಡುವೆ ಆ ಜಾಗ ನನ್ನದು, ಅವಳಿಗೇಕಲ್ಲಿ, ಆ ಜಾಗ ಇವಳಿಗ್ಯಾಕೆ ಎನ್ನುವ ತಕರಾರಿನಿಂದ ಎರಡೆರಡು ಬಾರಿ ಸರ್ವೆಯಾಯಿತು. ತುಕ್ರನಿಗೆ ಆ ಸರಪಳಿಯನ್ನು ನೋಡುವಾಗÀ ಹೆಬ್ಬಾವನ್ನು ಕಂಡಂತಾಗುತ್ತಿತ್ತು. ಅವನ ಸಣಕಲು ದÉೀಹ ಆ ಮಣಭಾರದ ಸರಪಳಿಯನ್ನು ಇಡೀ ದಿನ ಹಿಡಿದು ಸುತ್ತಾಡಲು ಹೆಣಗುತ್ತಿತ್ತು. ಮೂಳೆಯ ಮೇಲೆ ಡಾಂಬರು ಹೊಯ್ದದಂತಿರುವ  ಚರ್ಮ. ಗುಂಡಿಯ ನೀರಿನಲ್ಲಿ ಕಾಣುವ ಸೂರ್ಯನಂತೆ ಗುಳಿಬಿದ್ದ ಕಣ್ಣು. ಊರ ರಸ್ತೆಯಲ್ಲಿ ಯಥೇಚ್ಛ ಉಬ್ಬು ತಗ್ಗುಗಳಿರುವಂತೆ ಈತನ ದೇಹ ರಕ್ತಮಾಂಸ ತುಂಬಿಕೊಳ್ಳದೆ ಕೈಕಾಲಿನ ಗಂಟುಗಳೆ ಎದ್ದುಕಾಣುತ್ತಿದ್ದವು.     ಆತನಿಗೆ ಸರ್ವೆಗಿಂತಲೂ ಮನಸು ಕೊರೆಯುವ ವಿಚಾರವೆಂದರೆ. ಶೆಣೈ ಮಕ್ಕಳು ಆ ಜಾಗ ನನ್ನದು, ಈ ಜಾಗ ನನ್ನದು ಎನ್ನುವಾಗÀ ಬೇಸರವಾಗುತ್ತಿತ್ತು, ಅದೆಲ್ಲ ನನ್ನದು ಎಂದು ಆತನ ಮನಸ್ಸು ತಳಮಳಿಸುತ್ತಿತ್ತು. ಆತ ಬಹುಕಾಲದಿಂದ ಶೆಣೈಯೊರ ಮನೆಯಲ್ಲಿ ಜೀತದಾಳಿನಂತೆ ಕೆಲಸ ಮಾಡಿದವ, ಮೇಲಾಗಿ ಒಕ್ಕಲಿನವ. ಅವ ಹೇಳುವ ಧಣಿಗಳ ಗದ್ದೆಯ ಮಣ್ಣಿನ ಗುಣ ನನಗೆ ಗೊತ್ತಿರು...

ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ‘ಗಾಂಧಿ ಬಂದ’ ಕಾದಂಬರಿಯ ಮಹತ್ವ

ಇಮೇಜ್
ಕರಾವಳಿಯ ಬದುಕು ಕನ್ನಡದ ಸೀಮೆಯೊಳಗಿದ್ದರೂ ಸಂಪೂರ್ಣ ಭಿನ್ನವಾದ ಸಂಸ್ಕøತಿಯಾಗಿದೆ. ಈ ಸಂಸ್ಕøತಿಯ ಪೂರ್ಣ ಆಳ, ಅಗಲ ತಿಳಿಯಲು ಕರಾವಳಿಯ ಮಣ್ಣಿನ ಜೀವನದ ಭಾಗವಾಗದ ಹೊರತು ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಅಲ್ಲಿನ ತುಳು ಸಂಸ್ಕøತಿ ಜಾತಿ, ಮತ, ಪಂಥ, ಭೇದಗಳನ್ನು ಮೀರಿದ ಸಂಪತ್ತು. ಕೇರಳ, ಕರ್ನಾಟಕ ರಾಜ್ಯಗಳ ಒಳಗೆ ಈ ಸಂಸ್ಕøತಿ ಹರಡಿಕೊಂಡಿದೆ. ಇಲ್ಲಿ ಭಾಷೆ ಮತ್ತು ಜೀವನ ಹಾಲು ನೀರಿನಂತೆ ಬೆರೆತು ಹೋಗಿದೆ. ದ್ರಾವಿಡ ಭಾಷೆಗಳ ಸಂದರ್ಭದಲ್ಲಿ ತುಳುವಿನ ಚರ್ಚೆನಡೆದರೂ ಅದಕ್ಕೆ ನೀಡಿರುವ ಕಿಮ್ಮತ್ತು ಎಷ್ಟೆಂದು ಎಲ್ಲಾ ತುಳುವರಿಗೂ ತಿಳಿದಿರುವ ವಿಚಾರವೆ. ಇಂತಹ ಸಂದರ್ಭದಲ್ಲಿ ನಾಗವೇಣಿ ಅವರ ‘ಗಾಂಧಿ ಬಂದ’ ಕಾದಂಬರಿ ಮುಖ್ಯವಾಗುತ್ತದೆ.      ‘ಗಾಂಧಿ ಬಂದ’ ಕಾದಂಬರಿ ಕರಾವಳಿಯ ಒಂದು ಕಾಲಘಟ್ಟದ ಚರಿತ್ರೆ. ತುಳುವ ಸಂಸ್ಕøತಿಯ ಭಾಗವಾಗಿ, ಸ್ತ್ರೀವಾದಿ ದೃಷ್ಟಿಕೋನ, ಸ್ವಾತಂತ್ರ್ಯ ಹೋರಾಟ ಮತ್ತು ಗಾಂಧೀಜಿಯವರ ಚಳುವಳಿಯು ಕರಾವಳಿಯ ಮೇಲೆ ಬೀರಿದ ಪರಿಣಾಮ, ಈ ಎಲ್ಲಾ ದೃಷ್ಟಿಕೋನಗಳಿಂದ ಈ ಕಾದಂಬರಿಯನ್ನು ನೋಡಬಹುದು ಅಥವಾ ಬಿಡಿ ಬಿಡಿಯಾಗಿ ನೋಡಬಹುದು. ಹೌದು ಈ ಕಾದಂಬರಿಗೆ ಮೇಲೆ ಹೇಳಿದ ವಿಭಿನ್ನ ಅಂಚುಗಳಿವೆ. ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಹುದಾದ ಗುಣ ಈ ಕಾದಂಬರಿಗಿದೆ. ಹಲವು ದಾರಗಳಿಂದ, ವಿಭಿನ್ನ ನೂಲುಗಳಿಂದ ಹೆಣೆದು ಕಸೂತಿ ಹಾಕಿದ ನಾಗವೇಣಿಯವರ ಕಥನ ಕಲೆ ಮೆಚ್ಚುವಂತದ್ದೆ.    ಒಂದು...

ಹಂದರದೊಳಗೆ

ಇಮೇಜ್
ಮಿದುಗೊಡೆ ಹಂದರದಿ ಕಲಾವಿದರಿಬ್ಬರು ಕೂಡಿ ಸುರಿದ ಬಣ್ಣದ ಆರೋಪಕ್ಕೆ ಗುರಿಯಾಗಿ ಬಂಧಿಯಾಗಿ ಬಿದ್ದಿದ್ದೇನೆ ಯಾವ ಕೋರ್ಟು, ಬೇಡಿಗಳಿಲ್ಲದೆ ಬೆಳಕು ಶೂನ್ಯ ಕೋಟೆಯೊಳಗೆ ಬೆಟ್ಟದಲಿ ಹುಟ್ಟಿದ ಮರಕ್ಕೇನು ಗೊತ್ತು ಬೀಜವನು ಬಿತ್ತಿದವರಾರೆಂದು ಎನಗೂ ಇಲ್ಲಿ ಸುಳಿವು ಇಲ್ಲ ಬಿತ್ತಿದ್ದಾರೆ... ಬೆಳೆಯುತ್ತಿದ್ದೇನೆ... ವ್ಯಂಗ್ಯ, ಪ್ರಶಂಸೆ, ಆರೋಪ ಪ್ರವಚನಗಳ ಮಧ್ಯೆ ಸುಖವನು ಮರೆಸಿ ಸಾಲಕ್ಕೆ ಹೇತುವಾಗಿ ಬಿಳಿಯಂಗಿ ದೇವರ ಹುಂಡಿ ತುಂಬಿದ್ದೇನೆ ಮುಂದೆ...! ಕಸವಾಗಿ ಕೊಳೆತು ಗೊಬ್ಬರವಾಗಿ, ನಾರಿ ಗಬ್ಬೆದ್ದು ಹೋಗುವೆನೊ..!? ಜೋಕಾಲಿ ಪದಕೆ ಕಿವಿಯಾಗಿ, ಮುದುಡಿ ಮುದ್ದು ಕೂಸಾಗಿ ನಲಿಯುವೆನೋ..!? ಧಾವಿಸುತ್ತಿವೆ... ಮತಿ ಬಲಿಯುವ ಮುನ್ನ ದಿಕ್ಕೆಂಟು ಭಾಗದಿಂದ ದಿಕ್ಕೆಟ್ಟ ಪ್ರಶ್ನೆಗಳು ಸಮ್ಮತಿ ಅಸಮ್ಮತಿಗೆ ಸಾಕ್ಷಿ ನಾನು.. ಸೋಲು ಗೆಲುವಿನ ನಿಷ್ಕರ್ಷೆ ನಾನು.. ಎಲ್ಲವೂ ಅಸಂಗತ, ಗೋಜಲು ಕರುಳ ಹಗ್ಗದಲಿ ಹೊಸೆದ ಬಾಂಬು ನಾನು ರಕ್ತರಾಡಿಯಲ್ಲೆ ಪ್ರಕಟವಾಗುತ್ತೇನೆ ಚಿತ್ಕಾರ, ಚಿರಾಟ ಕಣ್ಣೀರ ವಿಷಮಾವಸ್ಥೆಯಲಿ ಕೊನೆಗೆಲ್ಲ ಶಾಂತ, ಸಂತೋಷ ಮೌನದಲಿ... ಮಿದುಗೊಡೆ ಹಂದರದೊಳಗೆ ಮಾಂಸಮುದ್ದೆಯಾಗಿ ನೀವು ಹೊಲಿಯುವ ಕುಲಾವಿಗೆ ದೇಹ ಹೊಂದಿಸುತ್ತಿರುವೆ ಮಳೆಯಾಸೆ ಹೊತ್ತ ದಟೈಸಿ ಕವಿದ ಕಾರ್ಮೋಡದಂತೆ ಗೋಜಲಿನಿಂದ ಮಗ್ಗುಲು ಬದಲಾಯಿಸ ಹೊರಟ ಹೆಸರಿಡುವ ಮೊದಲು ತಲೆಕೆಳಗಾದ ‘ಭ್ರೂಣ’ ನಾನು ಮಿದುಗೊಡೆ ಹಂದರದಿ ಯಾವ ಕೋರ್ಟು, ಬೇಡಿಗಳಿಲ್ಲದೆ ಕಲಾವಿದರಿಬ್ಬರು ಕೂಡಿ ಸುರ...

ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ

ಇಮೇಜ್
  ಕನ್ನಡದ ದೈತ್ಯ ಪ್ರತಿಭೆ ಕುವೆಂಪು ಅವರ ಮುಂದುವರೆದ  ಭಾಗವಾಗಿ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದವರು ಪೂರ್ಣಚಂದ್ರ ತೇಜಸ್ವಿಯವರು. ಕುವೆಂಪು ಅವರ ಮಗನಾದರೂ ಬೆಳೆದದ್ದು ಮಾತ್ರ ಅಪ್ಪಟ ಸ್ವತಂತ್ರ ಪ್ರತಿಭಯಾಗಿಯೆ. ಈ ಕಾರಣಕ್ಕಾಗಿಯೊ ಏನೊ ಕುವೆಂಪು ಕಾಡು ಬಿಟ್ಟು ನಾಡು ಸೇರಿದರು, ತೇಜಸ್ವಿ ನಾಡಿನ ಗುಂಗು ತೊರೆದು ಪ್ರಕೃತಿಯಲ್ಲಿ ಲೀನವಾದರು. ಕೆ.ಪಿ ತೇಜಸ್ವಿಯವರ ಬದುಕು ಬಹು ಆಯಾಮದ ವರ್ಣರಂಜಿತ ಬದುಕು. ತಂದೆಯೂ ಮಗನನ್ನು ಯಾವ ವಿಚಾರದಲ್ಲೂ ನಿರ್ಬಂಧಿಸದೆ ಸ್ವತಂತ್ರ ಪ್ರವೃತ್ತಿಯನ್ನು ಮಗನಲ್ಲಿ ಬಿತ್ತಿದರು. ಮಗನ ಪ್ರತಿಭೆಗೆ ನೀರೆರೆದು ಪೋಷಿಸಿದರು. ಅಂತೆಯೇ ಮಗನೂ ತಂದೆಯ ನಂಬಕೆಯನ್ನು ಹುಸಿಗೊಳಿಸದೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿರಾಜಿಸಿದರು. ಆದರೆ ಅವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಯಿತು. ನಷ್ಟಮಾತ್ರವಲ್ಲ ಭವಿಷ್ಯದಲ್ಲಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬರುವ ಅವಕಾಶವೂ ತಪ್ಪಿತು ಎಂಬ ನಿರಾಶೆ ಸಾಹಿತ್ಯ ವಲಯದಲ್ಲಿ ಕೇಳಿಬಂತು.     ನಾನು ಇತ್ತೀಚಿಗೆ ತೇಜಸ್ವಿಯವರ ಕಾದಂಬರಿಗಳನ್ನೆಲ್ಲ ಓದಿ ಮುಗಿಸಿದೆ. ಅವರ ಕಥೆಗಳನ್ನು ‘ಅಬಚೂರಿನ ಪೋಸ್ಟಾಫಿಸು’ ಪುಸ್ತಕದಲ್ಲಿ ಓದಿದ್ದೆ, ಅಲ್ಲದೆ ಬಿಡಿ ಬಿಡಿಯಾಗಿಯೂ ಓದಿದ್ದೇನೆ. ಪ್ರತಿಯೊಂದು ಕಥೆ. ಕಾದಂಬರಿಯಲ್ಲೂ ಪ್ರಕೃತಿ ತೇಜಸ್ವಿಗೆ ಬೆರಗಾಗಿ ಕಂಡಿದೆ. ಓದುಗನಿಗೂ ಈ ಅನುಭವವಾಗುತ್ತದೆ ಮತ್ತು ಅವರ ಬರಹಗಳಿಗೂ...

ಹೂ ಬಾಡಿತು

ಇಮೇಜ್
ಹಸಿರು ಮರದ ಟೊಂಗೆಯ ಹೂ ಅರಳಿತು ನಿನ್ನೆ, ನಿನ್ನೆ ಮುಂಜಾವ ಮಂಜಿನಲಿ ಮೊಗ್ಗಾಗಿ ನಕ್ಕ ಹೂ ಅರಳಿತು ಹಕ್ಕಿ ತುದಿಗೆಲ್ಲ ಎಲೆಯಲಿ ಕುಳಿತು ಮಧುವ ಹೀರಿತ್ತು ದಿನ ಮುಗಿದು ರಾತ್ರಿ ಸರಿದು ಬೆಳಕು ಹರಿದಾಗ ಸುಕ್ಕಾಗಿ ಮುರುಟಿತ್ತು ಹಗಲ ಬೆಳಕಲಿ ಕಂಗೊಳಿಸಿ ಕತ್ತಲ ನೀರವತೆಯಲಿ ಮುದುಡಿತ್ತು ಮೊಗ್ಗಾಗಿ ಕಣ್ಣು ಕುಕ್ಕಿತ್ತು ಅರಳಿ ರಮಿಸಿತ್ತು ದಿನ ಒಂದು ಕಳೆದಿತ್ತು ಹಸಿರ ಪೊರೆಯಲಿ ಹುದುಗಿತ್ತು ಕಳಚಿ ಹೊರಬಿತ್ತು ಸೊಗಸಾಗಿತ್ತು, ಮರುದಿನ ಕೆಳಗಿತ್ತು ಕಟ್ಟುವ ಕೈ ಸೋಕಿತು ದೇವರ ಶಿರವೇರಿತು ದೀಪದ ಬೆಳಕು ಮಿನುಗಿತ್ತು ಹಲವು ಕಣ್ಣುಗಳ ತನ್ನೆಡೆಗೆ ಸೆಳೆದಿತ್ತು ಹೊತ್ತು ಮುಳುಗುವುದರೊಳಗೆ ಹಳೇ ಗೆಳೆಯರ ಸೇರಿತ್ತು ಇಬ್ಬನಿ ಸುರಿವಾಗ ಬಣ್ಣವಿತ್ತು, ಅಂದವಿತ್ತು, ನವಿರಾಗಿತ್ತು ಬೆಳಕು ಕಳೆಗುಂದಿತು ತಮ ಆವರಿಸಿತು ಹೂ ಬಾಡಿತು. ದುಂಬಿಗಳ ಝೇಂಕಾರ ರವದಲಿ ಹಾರಾಟ ಮೇಲಾಟದಲಿ ಗರ್ಭನಿಂತಿತು ಅದೇ ನಗುವಿನ ಸಲ್ಲಾಪದಲಿ ದಿನ ಕಳೆಯಿತು ತೊಟ್ಟು ಕಳಚಿತು ಭಕ್ತಿಗೆ, ಅಂದಕೆ, ಸುಖಕೆ ಕೊನೆಗೆ ಆಘ್ರಾಣಿಸಿ ಅನುಭವಿಸಲು ಮೊಗ್ಗಾಗಿ ಹೂವಾಗಿ ಕಾಯಾಗಿ ದಿನವೊಂದು ಕಳೆಯಿತು ಆಕಾಶಕ್ಕೇರಿದ ಮುಖ ಭೂಮಿಗೆ ಇಳಿದಿತ್ತು ಬೀಜ ಮಣ್ಣು ಸೇರಿತು ಮತ್ತೆ, ಅದೇ ಸತ್ವ ಅದೇ ಕಸುವು ಗಾರು ನೆಲವ ಸೀಳಿ ಹೊರಬಿತ್ತು ದಿನದ ಹಂಗು ಕಳಚಿತು ಆಯುಷ್ಯ ಮರಳಿತು  :-ಪ್ರಶಾಂತ್ ದಿಡುಪೆ :-ರೇಖಾ ಚಿತ್ರ: ವಿಜಯ...

ಈ ಸಮಯ

ಇಮೇಜ್
ಕಟ್ಟಿದ ಸರವೊಂದಕ್ಕೇನು ಬಲ ಅನುಸರಿಸುವರೆಂಬ ಹುಂಬಿನಲಿ ಸುರಿಯಿತಕ್ಷತೆಯ ಮಳೆ ದಕ್ಕಿತು ಒಪ್ಪಿಗೆಯ ಚಾವಿ ಮುಚ್ಚಿತಲ್ಲಿಗೆ ಸ್ವಾತಂತ್ರ್ಯ ದಾರಿ ಜಲಬತ್ತಿದ ಬರಡು ರೇಖೆಗಳು ಮೂಡಿತ್ತು ವದನದಲಿ ಸಂಬ್ರಮದ ಸುಳಿಯಲ್ಲಿ ಸತ್ತಿತ್ತು ದನಿಯೊಂದು ಕಟ್ಟಳೆ ಕೆಡವಲಾಗದ ವೇದನೆಯಲಿ ನಿರೀಕ್ಷೆ ಮುಟ್ಟಲಾಗದ ಬೇನೆಯಲಿ ಸಹಿಸಿ, ಸಲಹಿದ ಓ ತಾಯೇ ನಿನಗೂ ಬೇಕಾಯ್ತೆ ಈ ಪರಂಪರೆ...? ನೆನಪು ಕಷ್ಟಗಳಿಗೂ ಮರೆವೆ..! ಒಮ್ಮೆ ಬೆಂದರೂ ಮತ್ತೇಕೆ ದೂಡುವೆ ಬೆಂಕಿಗೆ...? ಬೇಡ, ಬೇಡ ನಾನೆ ಕೊಳ್ಳಿಯಿಕ್ಕುವೆ ಕಟ್ಟಳೆಯ ಕಟ್ಟಿಗೆ                                          :-ಪ್ರಶಾಂತ್ ದಿಡುಪೆ :-ರೇಖಾಚಿತ್ರ ಬರೆದವರು: ವಿಜಯ್ ರಮೇಶ್ ಬೊಳಶೆಟ್ಟಿ, ಹಂಪಿ

ಪರಮೇಶಿಯ ಪಾದಯಾತ್ರೆ

ಇಮೇಜ್
ಪರಮೇಶಿಯ ಪಾದಯಾತ್ರೆ     ಪರಮೇಶಿ ಅದಾವ ಕ್ಷಣದಲ್ಲಿ ಚಾಪೆಯಿಂದ ದಡಕ್ಕನೆ ಎದ್ದಿದ್ದನೊ ತನ್ನ ಮುರುಕಲು ಪಂಚೆಯನ್ನೆತ್ತಿಕೊಂಡ. ಅದನ್ನ ಪಂಚೆಯೆಂದು ಆತ ಉಟ್ಟುಕೊಂಡಿರುವುದರಿಂದ ಹೇಳಬಹುದಷ್ಟೇ, ಅದರಲ್ಲಿ ಸಾವಿರ ತೂತು ಬಿದ್ದು ಅಕ್ಷರಶಃ ಮೀನಿನ ಬಲೆಯಂತಾಗಿತ್ತು. ಆಗತಾನೆ ಸ್ಕೂಲಿನಲ್ಲಿ ಪ್ರಪಂಚದ ಭೂಪಟವನ್ನು ಅವಸರದಲ್ಲಿ ನೊಡಿ ಬಂದ ಹೈಕಳಾಗಿದ್ದರೆ ಅರೇ ಇದೇನು ಪರಮೇಶಿ ಪ್ರಪಂಚವನ್ನೇ ಸುತ್ತಿಕೊಂಡಿದ್ದಾನಲ್ಲ ಎಂದು ಬಾಯಿ ಬಿಡುತ್ತಿದ್ದರು. ಎದ್ದವನೇ ಸೀದಾ ಮಾವಿನ ಮರದ ಬಳಿ ಓಡಿದ. ಆತ ಬೆಳಗ್ಗಿನ ಜಾವ ಮೊದಲು ಭೇಟಿ ನೀಡುವ ಸ್ಥಳವದು. ಪ್ರಪಂಚ ಫಾರ್‍ವರ್ಡ್ ಆಗಿದ್ದರೂ ಪರಮೇಶಿ ಇನ್ನೂ ಬ್ಯಾಕಲ್ಲೇ ಇದ್ದ. ಹೆಂಡತಿ ಪೂರ್ವಿ ಸಾವಿರ ಸಾರಿ ಪೇಸ್ಟ್ ತನ್ನಿ ಎಂದರೂ ಅದರಲ್ಲಿ ಮೂಳೆ ಪುಡಿ ಇದೆ ಅದರಲ್ಲಿ ಬೆಳಗಾಗಿ ಎದ್ದು ಹಲ್ಲುಜ್ಜೊದ ಎಂದು ಹೆಂಡತಿಯ ಬಾಯಿಗೆ ಬೀಗ ಹಾಕಿದ್ದ. ಆತನೂ ಜಿಪುಣಾಗ್ರೇಸರ, ಎಲ್ಲರೂ ವಸ್ತುವಿನ ಒಳ್ಳೆಯ ಗುಣವನ್ನು ಕೇಳುವುದರಲ್ಲಿ ಇಂಟರೆಸ್ಟ್ ತೊರಿಸಿದ್ರೆ ಈತ ಅದರಿಂದಾಗುವ ಅಡ್ಡಪರಿಣಾಮಗಳನ್ನು ರಿಸರ್ಚ್ ಮಾಡಿ ತಿಳಿದವನಂತೆ ತನ್ನದೆ ಕಟ್ಟುಕತೆಗಳನ್ನು ಕಟ್ಟಿ ಬೊಗಳೆ ಬಿಡುತ್ತಿದ್ದ. ಬೇಗ ಬೇಗ ಗೆಲ್ಲೊಂದರಿಂದ ಎಲೆಯೊಂದನ್ನು ಕಿತ್ತು, ಬಾಯಿಯಿಂದ ಗಾಳಿ ಬೆಳಕನ್ನು ಸವಿಯಲು ಹೊರಗೆ ಬಂದಂತಿದ್ದ ಹಲ್ಲನ್ನು ತಿಕ್ಕತೊಡಗಿದ. ಆತನ ಮುಖವನ್ನು ಮೊದಲ ಬಾರಿ ನೋಡಿದವರು ಮುಂದೆ ಅಪರೂಪಕ್ಕೆ ಸಿಕ್ಕಿದರೆ ಅನಾಯಾಸವಾ...