ಈ ಸಮಯ
ಕಟ್ಟಿದ ಸರವೊಂದಕ್ಕೇನು ಬಲ
ಅನುಸರಿಸುವರೆಂಬ ಹುಂಬಿನಲಿ
ಸುರಿಯಿತಕ್ಷತೆಯ ಮಳೆ
ದಕ್ಕಿತು ಒಪ್ಪಿಗೆಯ ಚಾವಿ
ಮುಚ್ಚಿತಲ್ಲಿಗೆ ಸ್ವಾತಂತ್ರ್ಯ ದಾರಿ
ಜಲಬತ್ತಿದ ಬರಡು ರೇಖೆಗಳು
ಮೂಡಿತ್ತು ವದನದಲಿ
ಸಂಬ್ರಮದ ಸುಳಿಯಲ್ಲಿ ಸತ್ತಿತ್ತು ದನಿಯೊಂದು
ಕಟ್ಟಳೆ ಕೆಡವಲಾಗದ ವೇದನೆಯಲಿ
ನಿರೀಕ್ಷೆ ಮುಟ್ಟಲಾಗದ ಬೇನೆಯಲಿ
ಸಹಿಸಿ, ಸಲಹಿದ ಓ ತಾಯೇ
ನಿನಗೂ ಬೇಕಾಯ್ತೆ ಈ ಪರಂಪರೆ...?
ನೆನಪು ಕಷ್ಟಗಳಿಗೂ ಮರೆವೆ..!
ಒಮ್ಮೆ ಬೆಂದರೂ ಮತ್ತೇಕೆ ದೂಡುವೆ ಬೆಂಕಿಗೆ...?
ಬೇಡ, ಬೇಡ ನಾನೆ ಕೊಳ್ಳಿಯಿಕ್ಕುವೆ ಕಟ್ಟಳೆಯ ಕಟ್ಟಿಗೆ
:-ಪ್ರಶಾಂತ್ ದಿಡುಪೆ
:-ರೇಖಾಚಿತ್ರ ಬರೆದವರು: ವಿಜಯ್ ರಮೇಶ್ ಬೊಳಶೆಟ್ಟಿ, ಹಂಪಿ
Nice
ಪ್ರತ್ಯುತ್ತರಅಳಿಸಿAwesome.... Keep it up dr
thank u..
ಪ್ರತ್ಯುತ್ತರಅಳಿಸಿ