ಸಮತೆಯ ಕಟ್ಟು


 

ಸಮತೆಯ ಕಟ್ಟು

 

ಹರಿದ ಅಂಗಿಗೆ ಕೊಳೆತ ಚಡ್ಡಿಗೆ

ತೆರಿಗೆ ಕಟ್ಟುವ ಸಮಯ ಬಂದಿದೆ

ನಿಮ್ಮ ದೇವರ ಜಗುಲಿ ಮೇಲಿನ

ಕಟ್ಟಿಗೆ ಭಯವೂ ಕಾಡುತಿದೆ

 

ಹರಿದ ಗೋಣಿಚೀಲ ಮಸ್ತಕದ

ದಾಸ್ತಾನಾಗುವ ಸಮಯ ಬಂದಿದೆ

ಮಸ್ತಕ ಪುಸ್ತಕದಿಂದ ದೂರವಾದ ಕೈಗಳು

ನಿಮ್ಮ ಜಗುಲಿ ಮೇಲಿನ ಕಟ್ಟಿಗೆ ಸವಾಲೊಡ್ಡಿವೆ

ಸಮಯ ಸರಿದು ಹೋಗುವ ಮುನ್ನ ತೆರಿಗೆ ಕಟ್ಟಿ

 

ಕುರ್ಚಿಯ ಕಾಲುಗಳು ಅಲುಗಾಡುವ ಸಮಯ ಬಂದಿದೆ

ಕಾಲುಗಳೆ ಇಲ್ಲದ ಕಾಲುಗಳು

ನಿಮ್ಮ ಕನಸುಗಳನು ಕದಡಬಹುದು

ಹೊತ್ತು ಸತ್ತು ಹೋಗುವ ಮುನ್ನ ತೆರಿಗೆ ಕಟ್ಟಿ

 

ನಿಮ್ಮ ಕಟ್ಟಳೆಗಳನ್ನು ಮೀರುವ

ಸಮಾನತೆಯ ಕಟ್ಟು ಬಂದಿದೆ

ನಿಮ್ಮ ಬೂದಿ ಹಾರಿ ಹೋಗುವ ಮುನ್ನ ತೆರಿಗೆ ಕಟ್ಟಿ

                                         

                                                    ನಾಗರಾಜ್ ಎಂ. ಕೆ 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಹುಮುಖಿ ಪ್ರತಿಭೆ ಕೆ.ಪಿ ತೇಜಸ್ವಿಯವರ ಬದುಕು ಬರಹ

ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ‘ಗಾಂಧಿ ಬಂದ’ ಕಾದಂಬರಿಯ ಮಹತ್ವ